ವಿಷ್ಣುಪಾದ ಮಂದಿರವು ಭಾರತದ ಬಿಹಾರ ರಾಜ್ಯದ ಗಯಾದಲ್ಲಿರುವ ಒಂದು ಪ್ರಾಚೀನ ದೇವಾಲಯವಾಗಿದೆ. ಇದು ವಿಷ್ಣುವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಫ಼ಲ್ಗು ನದಿಯ ಬದಿಯಲ್ಲಿ ಸ್ಥಿತವಾಗಿದೆ. ಇದು ಧರ್ಮಶಿಲೆ ಎಂದು ಕರೆಯಲ್ಪಡುವ ವಿಷ್ಣುವಿನ ಒಂದು ಹೆಜ್ಜೆಗುರುತಿನಿಂದ ಗುರುತಿಸಲ್ಪಟ್ಟಿದೆ. ಇದು ಬ್ಯಾಸಾಲ್ಟ್‌ನ ಒಂದು ಖಂಡದಲ್ಲಿ ಕೆತ್ತಲ್ಪಟ್ಟಿದೆ. ಈ ರಚನೆಯ ತುದಿಯಲ್ಲಿ ಗಯಾಪಾಲ್ ಪಾಂಡಾ ಬಾಲ್ ಗೋವಿಂದ್ ಸೇನ್ ಎಂಬ ಒಬ್ಬ ಭಕ್ತನು ದಾನಮಾಡಿದ ೫೦ ಕಿಲೊ ತೂಕದ ಚಿನ್ನದ ಬಾವುಟವಿದೆ. ದೇವಾಲಯದ ನಿರ್ಮಾಣದ ದಿನಾಂಕವು ಅಪರಿಚಿತವಾಗಿದೆ ಮತ್ತು ರಾಮನು ಸೀತೆಯ ಜೊತೆಗೆ ಈ ಸ್ಥಳಕ್ಕೆ ಭೇಟಿನೀಡಿದ್ದನೆಂದು ನಂಬಲಾಗಿದೆ. ಇಂದಿನ ದಿನದ ರಚನೆಯನ್ನು ಇಂದೋರ್‌ನ ರಾಣಿ ದೇವಿ ಅಹಲ್ಯಾ ಬಾಯಿ ಹೋಳ್ಕರ ೧೭೮೭ರಲ್ಲಿ ಫಲ್ಗು ನದಿಯ ತಟದ ಮೇಲೆ ಮರು ನಿರ್ಮಿಸಿದಳು. ಭೇಟಿಕಾರರು ಮೇಲಿನಿಂದ ದೇವಾಲಯದ ನೋಟ ನೋಡಲು ಬ್ರಹ್ಮಜುನಿ ಗುಡ್ಡದ ಶಿಖರದ ಮೇಳೆ ಹೋಗಲು ಇಷ್ಟಪಡುತ್ತಾರೆ. == ಉಲ್ಲೇಖಗಳು ==